ನವದ್ವೀಪ -
ಪಶ್ಚಿಮ ಬಂಗಾಲ ರಾಜ್ಯದ ನದಿಯಾ (ನೋಡಿ- ನದಿಯಾ) ಜಿಲ್ಲೆಯ ಒಂದು ಪಟ್ಟಣ. ಹಿಂದೆ ನದಿಯಾ ಎಂದೇ ಇದಕ್ಕೂ ಹೆಸರಿತ್ತು. ನವದ್ವೀಪ ಎಂಬುದು ಪ್ರಾಚೀನ ನಾಮ. ಉ.ಅ. 230 25 ಮತ್ತು ಪೂ.ರೇ. 880 22 ಮೇಲಿರುವ ಈ ಪಟ್ಟಣದ ಜನಸಂಖ್ಯೆ 93,986 (1971). 1063ರಲ್ಲಿ ಸ್ಥಾಪಿತವಾದ ಈ ನಗರ, ಸಂಸ್ಕøತ ವಿದ್ಯೆ ಮತ್ತು ತರ್ಕಶಾಸ್ತ್ರದ ನೆಲೆವೀಡೆನಿಸಿ ಭಾರತದ ಎಲ್ಲೆಡೆಗಳಿಂದ ವಿದ್ವಾಂಸರನ್ನು ಆಕರ್ಷಿಸುತ್ತಿತ್ತು. ಇದು ಬಂಗಾಲದ ಸೇನ ವಂಶದ ದೊರೆಗಳ ರಾಜಧಾನಿಯಾಗಿತ್ತು. 13ನೆಯ ಶತಮಾನದಲ್ಲಿ ಇದು ಮುಸ್ಲಿಮರ ವಶವಾಯಿತು. ಪ್ರಖ್ಯಾತ ವೈಷ್ಣವ ಅವತಾರಪುರುಷ ಚೈತನ್ಯನ (1485-1533) ಜನ್ಮಸ್ಥಳ ಇದು-ಲೋಹಪಾತ್ರೆ ಮತ್ತು ಮಣ್ಣಿನ ಪಾತ್ರೆಗಳಿಗಾಗಿ ಇದು ಪ್ರಸಿದ್ಧವಾಗಿದೆ. ಇಲ್ಲಿ ಕಲ್ಕತ್ತ ವಿಶ್ವವಿದ್ಯಾಲಯಕ್ಕೆ ಸೇರಿದ ಕಾಲೇಜ್ ಒಂದಿದೆ.				
			(ಎಸ್.ಎಸ್.ಎಂ.ಯು.; ಪಿ.ವಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ